ಮಂಗಳವಾರ, ಮಾರ್ಚ್ 1, 2016

ಆ ನಾಲ್ಕು ಸುಸಂದೇಶಗಳು

'ಹೊಸ ಒಡಂಬಡಿಕೆ'
ಆ ನಾಲ್ಕು ಸುಸಂದೇಶಗಳು

ಅಂತರ್ಜಾಲದಲ್ಲಿ ದೊರೆಯುವ ಬೈಬಲ್‌ಗೆ ಸಂಬಂಧಿಸಿದ ಕನ್ನಡದ ಕೆಲವೇ ಬ್ಲಾಗ್‌ಗಳು ಓದಲು ಅಸಮರ್ಥವಾದ ಬ್ಲಾಗುಗಳಾಗಿದ್ದು; ಅವು ನೇರವಾಗಿ ತಂತ್ರಾಂಶಗಳ ಮೂಲಕ ಅನುವಾದಗೊಂಡಿರುವುದರಿಂದ ಅವುಗಳನ್ನು ಜೀರ್ಣಿಸಿಕೊಳ್ಳುವುದು ಸುಲುಭದ ಮಾತಂತೂ ಅಲ್ಲ. ಅವುಗಳಲ್ಲಿ ಒಂದು, 'ವಾಚ್‌ಟವರ್‌'ನವರ ಬೈಬಲ್‌. ಇದು ನೋಡಲು ಆಕರ್ಷಕ. ಕೆಲಸ ಶ್ಲಾಘನೀಯ. ಆದರೆ ಭಾಷೆ ಸರಳವಂತೂ ಅಲ್ಲ. ಹಾಗಾಗಿ ಸರಳಗನ್ನಡದಲ್ಲಿ ಒಂದು ಬೈಬಲ್‌ ಅಂತರ್ಜಾಲದಲ್ಲೂ ಇರಲಿ ಎಂಬ ನಿರ್ಧಾರದೊಂದಿಗೆ ಅಂತರ್ಜಾಲದ 'ಬ್ಲಾಗರ್‌'ನಲ್ಲಿ ಬರೆಯಲಾರಂಭಿಸಿದೆ. ಮೊಟ್ಟಮೊದಲು ಹೊಸ ಒಡಂಬಡಿಕೆಯನ್ನು ಬರೆಯುವುದು, ಎಂಬುದು ನನ್ನ ತೀರ್ಮಾನವಾಗಿತ್ತು. ಬರೆಯುತ್ತಾ ಹೋದಂತೆ ಇದು ನನ್ನೊಬ್ಬನಿಂದ ಆಗುವ ಕೆಲಸವಲ್ಲ ಎನಿಸಿತು. ಸಹಾಯಕ್ಕೆ ನನ್ನ ಅನೇಕ ಗೆಳೆಯರಲ್ಲಿ ಕೆಲವರ ಮೊರೆಹೋದೆ. ಸಂತೋಷದಿಂದ ಮೊದಲು ಒಪ್ಪಿದ ಅವರು, ಅನಂತರ ಅದು ತಮ್ಮಿಂದಾಗದ ಕೆಲಸ, ಎಂದು ಕೈಚೆಲ್ಲಿದರು. ಅಷ್ಟರಲ್ಲಾಗಲೇ 'ಮತ್ತಾಯನ ಸುಸಂದೇಶ' ಪೂರ್ಣಗೊಂಡಿತ್ತು. ಆದರೆ ಹಿಡಿದ ಕೆಲಸ ಪೂರ್ಣವಾಗಿರಲಿಲ್ಲ. ಅರ್ಧದಾರಿಯಲ್ಲಿ ಕೈಬಿಟ್ಟು ಹೋಗುವಂತಿರಲಿಲ್ಲ. ಎಲ್ಲಾದರೂ ಒಂದು ಕಡೆಗೆ ಅದನ್ನು ಎಳೆದು ತಂದು ನಿಲ್ಲಿಸಬೇಕಾಗಿತ್ತು. ಅಗೊಂದು ನಿರ್ಧಾರಕ್ಕೆ ಬಂದೆ; ಅದನ್ನು ನಾಲ್ಕು ಸುಸಂದೇಶಗಳಿಗಷ್ಟೆ ಸೀಮಿತಗೊಳಿಸಿದೆ. ಅಲ್ಲಿ ಒಂದು ಕೃತಿ ಪೂರ್ಣವಾದಂತಲ್ಲವೇ? ಹಾಗೆ ಬರೆದ ಮೊದಲೆರಡು ಕೃತಿಗಳನ್ನೂ(ಮತ್ತಾಯ ಮತ್ತು ಮಾರ್ಕ) ಸುಸಂದೇಶದ ಶೈಲಿಯಲ್ಲಿ ನನ್ನ ಶೈಲಿಯನ್ನೂ ಮಿಳಿತಗೊಳಿಸಿ ಬರೆದೆ. ಅದೂ ಕಷ್ಟವೆನಿಸಿದಾಗ ಬೆಂಗಳೂರಿನ 'ಬೈಬಲ್‌ ಸೊಸೈಟಿ ಆಫ್‌ ಇಂಡಿಯಾ' ಹೊರತಂದ ಹೊಸ ಒಡಂಬಡಿಕೆಯ ಸರಳ ಭಾಷಾಂತರದ ಮೊರೆಹೋದೆ. ಅದನ್ನೇ ನಕಲು ಮಾಡಿದೆ. ಆದರೆ ಯಥಾವತ್ತಾಗಿ ನಕಲು ಮಾಡದೆ ಅದನ್ನು ಅಲ್ಲಲ್ಲಿ ಇನ್ನಷ್ಟು ಸರಳಗೊಳಿಸಿದೆ. ದೀರ್ಘ 'ಪ್ಯಾರಾ'ಗಳನ್ನು ತುಂಡರಿಸಿ ಓದಲು ಸುಲುಭವಾಗುವಂತೆ ಮಾಡಿದೆ. ಹಾಗೆ ಸಿದ್ಧವಾದ ಕೃತಿಗಳು 'ಲೂಕ' ಮತ್ತು ಯೊವಾನ್ನನ ಸುಸಂದೇಶಗಳು. ಅಂತಿಮವಾಗಿ ಅವೆಲ್ಲವುಗಳನ್ನೂ ಸೇರಿಸಿ 'ಆ ನಾಲ್ಕು ಸುಸಂದೇಶಗಳು' ಎಂಬ ಶಿರ್ಷಿಕೆಯನ್ನು ನೀಡಿ ಮುಕ್ತಾಯಗೊಳಿಸಿದೆ. ಮೇ 2010ರಲ್ಲಿ ಆರಂಭವಾದ ಈ ಕೆಲಸವು ಪೂರ್ಣಗೊಂಡದ್ದು ಏಪ್ರಿಲ್‌ 2016ರಲ್ಲಿ; ಅಂದರೆ ಬರೋಬ್ಬರಿ ಆರು ವರ್ಷಗಳು. ಈ ಆರು ವರ್ಷಗಳಲ್ಲಿ 'ಮತ್ತಾಯನ ಸುಸಂದೇಶ'ವನ್ನೇ 172 ಜನರು ವೀಕ್ಷಿಸಿದ್ದಾರೆ ಎಂಬುದು ಸಂತಸದ ವಿಚಾರ. ನಾನು ಮಾಡಿದ ಕೆಲಸ ಸಾರ್ಥಕ ಎನ್ನುವ ಅನುಭವ ಇದರಿಂದ ನನಗಾಗಿದೆ. 

*ಇದೀಗ 'ಅಂತರರಾಷ್ಟ್ರೀಯ ಬೈಬಲ್‌ ಲೀಗ್‌'ನವರು ಪಿಡಿಎಫ್‌ ಮಾದರಿಯಲ್ಲಿ ಸಿದ್ಧಪಡಿಸಿದ ಸಂಪೂರ್ಣ ಬೈಬಲ್‌ನ ಪಿಡಿಎಫ್‌ ಮಾದರಿಯೊಂದು ನನಗೆ ವೀಕ್ಷಿಸಲು ದೊರೆಯಿತು. ನನ್ನ ಹೊಸ ಒಡಂಬಡಿಕೆಯ ಉಳಿದ ಭಾಗಗಳಾಗಿ ಅವುಗಳನ್ನು ಲಿಂಕ್‌ ಮುಖಾಂತರ ಇದಕ್ಕೆ ಅಳವಡಿಸಿಕೊಂಡಿದ್ದೇನೆ. ಇದು ಸರಳ ಮಾದರಿಯಲ್ಲದಿದ್ದರೂ ಓದಿ ಅರ್ಥಮಾಡಿಕೊಳ್ಳಲು ಅಡ್ಡಿಯಿಲ್ಲ.

ಧನ್ಯವಾದಗಳು.
-ಕೆ.ಜೆ.ಜಾರ್ಜ್‌

ಸುಸಂದೇಶಗಳಿಗೆ ಪ್ರವೇಶಿಸಲು ಕೆಳಗಿನ ಶಿರ್ಷಿಕೆಗಳನ್ನು ಕ್ಲಿಕ್‌ ಮಾಡಿರಿ




  1. ಮತ್ತಾಯನು ಬರೆದ ಸುಸಂದೇಶ
  2. ಮಾರ್ಕನು ಬರೆದ ಸುಸಂದೇಶ 
  3. ಲೂಕನು ಬರೆದ ಸುಸಂದೇಶ
  4. ಯೊವಾನ್ನನು ಬರೆದ ಸುಸಂದೇಶ

  • ಪ್ರೇಷಿತರ ಕ್ರಿಯಾಕಲಾಪಗಳು
  • ರೋಮನರಿಗೆ ಬರೆದ ನಿರೂಪ
  • ಕೊರಿಂಥದವರಿಗೆ ಬರೆದ ಮೊದಲ ನಿರೂಪ
  • ಕೊರಿಂಥದವರಿಗೆ ಬರೆದ ಎರಡನೆಯ ನಿರೂಪ
  • ಗಲಾತ್ಯದವರಿಗೆ ಬರೆದ ನಿರೂಪ
  • ಎಫೆಸದವರಿಗೆ ಬರೆದ ನಿರೂಪ 
  • ಫಿಲಿಪಿಯವರಿಗೆ ಬರೆದ ನಿರೂಪ
  • ಕೊಲೊಸ್ಸಿಯರಿಗೆ ಬರೆದ ನಿರೂಪ
  • ಥೆಸೆಲೋನಿಕದವರಿಗೆ ಬರೆದ ಮೊದಲ ನಿರೂಪ
  • ಥೆಸೆಲೋನಿಕದವರಿಗೆ ಬರೆದ ಎರಡನೆಯ ನಿರೂಪ
  • ತಿಮೋಥೇಯನಿಗೆ ಬರೆದ ಮೊದಲ ನಿರೂಪ 
  • ತಿಮೋಥೇಯನಿಗೆ ಬರೆದ ಎರಡನೆಯ ನಿರೂಪ 
  • ತೀತನಿಗೆ ಬರೆದ ನಿರೂಪ
  • ಫಿಲೆಮೋನನಿಗೆ ಬರೆದ ನಿರೂಪ 
  • ಇಬ್ರಿಯರಿಗೆ ಬರೆದ ನಿರೂಪ
  • ಯಕೋಬನು ಬರೆದ ನಿರೂಪ
  • ಪೇತ್ರನು ಬರೆದ ಮೊದಲ ನಿರೂಪ
  • ಪೇತ್ರನು ಬರೆದ ಎರಡನೆಯ ನಿರೂಪ
  • ಯೊವಾನ್ನನು ಬರೆದ ಮೊದಲ ನಿರೂಪ
  • ಯೊವಾನ್ನನು ಬರೆದ ಎರಡನೆಯ ನಿರೂಪ
  • ಯೊವಾನ್ನನು ಬರೆದ ಮೂರನೆಯ ನಿರೂಪ
  • ಯೂದನು ಬರೆದ ನಿರೂಪ  
  • ಪ್ರಕಟಣೆಗಳು

    ಇವರ ಇತರ ಲೇಖನಗಳು:

    ಕ್ರೈಸ್ತ ವಿಶ್ವಕೋಶ  (ಭೇಟಿಕೊಡಿ)





  • ಅಂತರ್ಜಾಲದಲ್ಲಿ ಪ್ರಸ್ತುತ ಲಭ್ಯವಿರುವ ಇತರ ಕನ್ನಡದ 'ಬೈಬಲ್‌' ತಾಣಗಳು:
    1. Word projectನ ಪವಿತ್ರ ಬೈಬಲ್‌
    2. Word planetನ ಪವಿತ್ರ ಬೈಬಲ್‌ 
    3. Wordfree ಕನ್ನಡ ಪವಿತ್ರ ಬೈಬಲ್
    4. Watch Tower ಬೈಬಲ್‌ ಪುಸ್ತಕಗಳು
    5. ಸತ್ಯವೇದ ಕನ್ನಡ ಪಿಡಿಎಫ್‌ ಡೌನ್‌ಲೋಡ್
    6. ಮಕ್ಕಳಿಗಾಗಿ ಬೈಬಲ್‌ 

    ಕಾಮೆಂಟ್‌ಗಳಿಲ್ಲ:

    ಕಾಮೆಂಟ್‌‌ ಪೋಸ್ಟ್‌ ಮಾಡಿ